ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.! ಯಾವುದೇ ವಿವಾದಗಳಿಗೆ ಸಿಲುಕದೆ, ಯಾರೊಂದಿಗೂ ಜಗಳ ಮಾಡಿಕೊಳ್ಳದೆ, ತಾನಾಯ್ತು, ತನ್ನ ಕೆಲಸ ಆಯ್ತು ಅಂತ ತನ್ನ ಪಾಡಿಗೆ ತಾನಿರುವ ನಿವೇದಿತಾ ಗೌಡ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಅದಕ್ಕೆ ಕಾರಣ ಜಗನ್ನಾಥ್. 'ದೊಡ್ಮನೆ'ಯಲ್ಲಿ 'ಟ್ರೂತ್/ಡೇರ್' ಆಟ ಆಡುತ್ತಿದ್ದ ಜಗನ್ನಾಥ್, ನಿವೇದಿತಾ ಗೌಡ ಬಗ್ಗೆ ತಮಗೆ ಅನಿಸಿದನ್ನ ನೇರವಾಗಿ ಹೇಳಿ ಆಕೆಯ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಜಗನ್ನಾಥ್ ರವರ ಒರಟು ಸ್ವಭಾವದಿಂದಾಗಿ ನಿವೇದಿತಾ ಗೌಡ ಗೊಳೋ ಎಂದು ಅತ್ತು ಬಿಟ್ಟಿದ್ದಾರೆ. ಅಷ್ಟಕ್ಕೂ, ಆಗಿದ್ದೇನು. ನಟ ಜಗನ್ನಾಥ್, ನಟಿ ಆಶಿತಾ ಚಂದ್ರಪ್ಪ, ಕೃಷಿ ತಾಪಂಡ, ಅನುಪಮಾ ಗೌಡ 'ಟ್ರೂತ್/ಡೇರ್' ಆಟ ಆಡುತ್ತಿದ್ದರು. ಜಗನ್ನಾಥ್ ಸರದಿ ಬಂದಾಗ, ನಟಿ ಆಶಿತಾ ಒಂದು ಡೇರ್ ಕೊಟ್ಟರು ಅರ್ಥಾತ್ ತಮ್ಮ 'ತಾಕತ್ತು ಪ್ರದರ್ಶನ' ಮಾಡಲು ಸೂಚಿಸಿದರು.
Bigg Boss Kannada 5: Week 4: Jaganath speaks harshly to Niveditha Gowda. Niveditha Gowda cries at Big House.